ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ 2023-24 ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ | kvcdc-Vokkaliga Samudaya Abhivruddi Nigama Loan Schemes 2023-24 Apply online

kvcdc-Vokkaliga Samudaya Abhivruddi Nigama Loan Schemes 2023: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ 2023-24ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಡೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯೋಜನೆಯ ಉದ್ದೇಶ, ಲಾಭಗಳು, ಅರ್ಹತೆಗಳ ವಿವರ ಕೆಳಗೆ ನೀಡಲಾಗಿದೆ ಮುಂದೆ ಓದಿ .

ಯೋಜನೆಯ ಉದ್ದೇಶಗಳು

ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ಆದೇಶ ಸಂಖ್ಯೆ : ಸಕಇ 225 ಬಿಸಿಎ 2000, ದಿನಾಂಕ: 30.03.2002 ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ -3ಎ ರ ಕ್ರಮ ಸಂಖ್ಯೆ 1(ಎ) ರಿಂದ 1(ಟಿ) ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಗೌಡ ಹಳ್ಳಿಕಾರ್, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡರ್, ನಾಮಧಾರಿಗೌಡ, ಉಪ್ಪಿನ ಕೊಳಗ / ಉತ್ತಮ ಕೊಳಗ ಒಕ್ಕಲಿಗ ಸಮುದಾಯಗಳು ಈ ಯೋಜನೆಯಡಿ ಆರ್ಥಿಕ ನೆರವಿನ ಲಾಭವನ್ನು ಪಡೆಯಬಹುದಾಗಿದೆ

ಕರ್ನಾಟಕ ಒಕ್ಕಲಿಗ ಸಮುದಾಯಕ್ಕೆ ಒಳಪಡುವ ಅರ್ಹ ಫಲಾನುಭವಿಗಳು ಕೆಳಗೆ ನೀಡಿರುವ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
 • ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
 • ಗಂಗಾ ಕಲ್ಯಾಣ ನೀರಾವರಿ ಯೋಜನೆ
 • ಶೈಕ್ಷಣಿಕ ಸಾಲ ಯೋಜನೆ
 • ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ
 • ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ
 • ಸ್ವಾವಲಂಬಿ ಸಾರಥಿ ಯೋಜನೆ
 • ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/10/2023

1. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (kvcdc- self Employment Direct Loan Scheme)

ಯೋಜನೆಯ ಉದ್ದೇಶ:

ಹಿಂದುಳಿದ ವರ್ಗಗಳು ಪ್ರವರ್ಗ -1, 2ಎ, 3ಎ, ಮತ್ತು 3ಬಿ ಗೆ ಸೇರಿದ ನಿರುದ್ಯೋಗಿ ಫಲಾನುಭವಿಗಳಿಗೆ ಕೃಷಿ ಅವಲಂಬಿತ ಚಟುವಟಿಕೆಗಳು , ಸಣ್ಣ ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯಗಳಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸಾಲದ ನೆರವು ನೀಡಲಾಗುವುದು.

ಅರ್ಹತೆಗಳು:

 • ಅಭ್ಯರ್ಥಿಗಳು ಹಿಂದುಳಿದ ವರ್ಗಗಳು ಎಂದು ಗುರುತಿಸಿದ ಪ್ರವರ್ಗ -1, 2ಎ, 3ಎ, ಮತ್ತು 3ಬಿ ಗೆ ಸೇರಿದವರಾಗಿರಬೇಕು.
 • ಕುಟುಂಬದ ವಾರ್ಷಿಕ ಆದಾಯ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ರೂ. 98,000/- ಹಾಗೂ ನಗರ ಪ್ರದೇಶದ ಅಭ್ಯರ್ಥಿಗಳಿಗೆ ರೂ. 1,20,000/- ಗಳನ್ನು ಮೀರಿರಬಾರದು.
 • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಹಾಗೂ 18 ರಿಂದ 55 ವರ್ಷದ ವಯಸ್ಸಿನವರಾಗಿರಬೇಕು.
 • ಪ್ರವರ್ಗ -1ರ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಕನಿಷ್ಠ 7 ನೇ ತರಗತಿ ತೇರ್ಗಡೆ ಯಾಗಿರಬೇಕು ಹಾಗೂ ಇತರೆ ಪ್ರವರ್ಗ ಗಳಲ್ಲಿನ ಅರ್ಜಿದಾರರು ಕನಿಷ್ಠ 10 ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ನಿರುದ್ಯೋಗಿ ಆಗಿರಬೇಕು.
 • ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ.

ಘಟಕ ವೆಚ್ಚ, ಸಹಾಯಧನ, ಹಾಗೂ ಸಾಲದ ಮೊತ್ತಗಳ ವಿವರಗಳು

ಘಟಕ ವೆಚ್ಚರೂ. 1,00,000/-ರ ವರೆಗೆರೂ. 1,00,001/- ರಿಂದ ರೂ. 2,00,000/-ರ ವರೆಗೆ
ಸಹಾಯಧನ(20%) ಅಥವಾ ಗರಿಷ್ಟ ರೂ. 20,000/-(15%) ಅಥವಾ ಗರಿಷ್ಟ ರೂ.30,000/-
ಸಾಲದ ಮೊತ್ತ
(ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ)
(80%) ಅಥವಾ ಗರಿಷ್ಟ ರೂ. 80,000/-(85%) ಅಥವಾ ಗರಿಷ್ಟ ರೂ. 1,70,000/-

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ಜಾತಿ ಪ್ರಮಾಣ ಪತ್ರ ಹಾಗೂ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
 • ರೇಷನ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ / ಆಧಾರ್ ಕಾರ್ಡ್.
 • ವಿದ್ಯಾರ್ಹತೆಯ ಪ್ರಮಾಣ ಪತ್ರ.
 • ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಫೋಟೋ.
 • ಬ್ಯಾಂಕ್ ಪಾಸ್ ಬುಕ್ (ಬ್ಯಾಂಕ್ ಖಾತೆಯು ಆಧಾರ್ ಲಿಂಕ್ ಆಗಿರಬೇಕು).

ಫಲಾನುಭವಿಗಳು ಆನ್ಲೈನ್ ಮೂಲಕ ಸೇವಾ ಸಿಂಧು, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

2. ಗಂಗಾ ಕಲ್ಯಾಣ ನೀರಾವರಿ ಯೋಜನೆ(kvcdc-Ganga Kalyan Schemes)

ಯೋಜನೆಯ ಉದ್ದೇಶ:

ಹಿಂದುಳಿದ ವರ್ಗಗಳ ಪ್ರವರ್ಗ-3ಎ ರಲ್ಲಿ ಬರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಹೊಂದಿಲ್ಲದಿದ್ದಲ್ಲಿ ನೀರಾವರಿ ಸೌಲಭ್ಯವನ್ನು ಪೂರೈಸಿ ಕೃಷಿ ಅಭಿವೃದ್ಧಿಗೆ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ

ಅರ್ಹತೆಗಳು:

 • ಅರ್ಜಿದಾರರು ಸಣ್ಣ ಮತ್ತು ಅತೀಸಣ್ಣ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
 • ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನನ್ನು ಹೊಂದಿರಬೇಕು
 • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು ವ್ಯವಸಾಯ ವೃತ್ತಿಯನ್ನು ನಿರ್ವಹಿಸುತ್ತಿರಬೇಕು
 • ಅರ್ಜಿದಾರರು ಯಾವುದೇ ಅನ್ಯ ಮೂಲಗಳಿಂದ ನೀರಾವರಿ ಸೌಲಭ್ಯಗಳನ್ನು ಹೊಂದಿರಬಾರದು
 • ಅರ್ಜಿದಾರರ ವಾರ್ಷಿಕ ಆದಾಯವು ರೂ.98,000/- ಗಳನ್ನು ಮೀರಿರಬಾರದು
 • ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ

ಘಟಕ ವೆಚ್ಚ, ಸಹಾಯಧನ, ಹಾಗೂ ಸಾಲದ ಮೊತ್ತಗಳ ವಿವರಗಳು

ಘಟಕ ವೆಚ್ಚಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮತ್ತು ರಾಮನಗರ ಜಿಲ್ಲೆಗಳಿಗೆಇತರ ಜಿಲ್ಲೆಗಳಿಗೆ
ಸಹಾಯಧನರೂ. 4,00,000/-ರೂ.3,00,000/-
ಸಾಲದ ಮೊತ್ತ
(ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ)
ರೂ. 50,000/-ರೂ. 50,000/-
ಒಟ್ಟು ಘಟಕ ವೆಚ್ಚರೂ. 4,50,000/-ರೂ. 3,50,000/-

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ಹಿಂದುಳಿದ ವರ್ಗಗಳ ಪ್ರವರ್ಗ-3ಎ ರಲ್ಲಿ ಬರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಜಾತಿ ಪ್ರಮಾಣ ಪತ್ರ ಹಾಗೂ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
 • ಅರ್ಜಿದಾರರು ಸಣ್ಣ ಮತ್ತು ಅತೀ ಸಣ್ಣ ರೈತರಾಗಿರುವ ಬಗ್ಗೆ ಕಂದಾಯ ಅಧಿಕಾರಿಗಳಿಂದ ಪ್ರಮಾಣಪತ್ರ ಪಡೆದಿರಬೇಕು
 • ರೇಷನ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ / ಆಧಾರ್ ಕಾರ್ಡ್.
 • ವಿದ್ಯಾರ್ಹತೆಯ ಪ್ರಮಾಣ ಪತ್ರ.
 • ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ 3 ಫೋಟೋಗಳು.
 • ಬ್ಯಾಂಕ್ ಪಾಸ್ ಬುಕ್ (ಬ್ಯಾಂಕ್ ಖಾತೆಯು ಆಧಾರ್ ಲಿಂಕ್ ಆಗಿರಬೇಕು).

3. kvcdcಶೈಕ್ಷಣಿಕ ಸಾಲ ಯೋಜನೆ: ಹೊಸ ವಿದ್ಯಾರ್ಥಿಗಳಿಗೆ

ಯೋಜನೆಯ ಉದ್ದೇಶ:

ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅರಿವು ಶೈಕ್ಷಣಿಕ ಸಾಲ (kvcdc- Education Loan Schemes) ಯೋಜನೆಯ ಮೂಲಕ ಸಮುದಾಯದ ಫಲಾನುಭವಿಗಳಿಗೆ ವೃತ್ತಿಪರ ಉನ್ನತ ಕೋರ್ಸುಗಳಲ್ಲಿ ವ್ಯಾಸಂಗ ಮಾಡಲು ನೆರವು ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ.

ಸಂಕ್ಷಿಪ್ತ ಮಾಹಿತಿ

ಪ್ರವೇಶ ಶುಲ್ಕ , ಭೋದನಾ ಶುಲ್ಕ , ಲ್ಯಾಬೊರೇಟರಿ ಫೀಸ್ , ಪರೀಕ್ಷಾ ಶುಲ್ಕ ಹಾಗೂ ಸರ್ಕಾರದ ಇತರೆ ಶುಲ್ಕಗಳು , ಪಠ್ಯ ಪುಸ್ತಕ ಹಾಗೂ ಉಪಕರಣಗಳ ವೆಚ್ಚ , ಹಾಸ್ಟೆಲ್ ಫೀಸ್ , ಇತರೆ ವಿದ್ಯಾಭ್ಯಾಸಕ್ಕೆ ಸಂಬಂದಿಸಿದ ವೆಚ್ಚಗಳ ಅಂದಾಜು ಮೊತ್ತ ಎಲ್ಲವನ್ನು ಒಳಗೊಂಡು ಗರಿಷ್ಟ 1 ಲಕ್ಷದ ವರೆಗೆ ವಾರ್ಷಿಕ ಬಡ್ಡಿ ದರ ಶೇ. 2 ರಂತೆ ಸಾಲವನ್ನು ಕಲ್ಪಿಸಲಾಗುವುದು

ಸಾಲ ಮಂಜೂರು ಮಾಡಲು ಈ ಕೆಳಗಿನ ಕೋರ್ಸುಗಳು ಒಳಗೊಂಡಿರುತ್ತದೆ
ವೈದಕೀಯ, ದಂತ ವೈದಕೀಯ , ಇಂಜಿನಿಯರಿಂಗ್ / ಟೆಕ್ನಾಲಜಿ / ಆರ್ಕಿಟೆಕ್ಚರ್ , ಐ.ಎಸ್.ಎಂ ಮತ್ತು ಎಚ್ ( ಇಂಡಿಯನ್ ಸಿಸ್ಟಮ್ ಒಫ್ ಮೆಡಿಸಿನ್ ಮತ್ತು ಹೋಮಿಯೋಪತಿ ), ವೃತ್ತಿಪರ ಕೋರ್ಸುಗಳಾದ ಕಂಪನಿ ಸೆಕ್ರೆಟರಿ, ಚಾರ್ಟೆಡ್ ಅಕೌಂಟೆಂಟ್ ಮತ್ತು ಕಾಸ್ಟ್ & ವರ್ಕ್ಸ್ ಅಕೌಂಟೆಂಟ್ , ಎಂ.ಸಿ.ಎ, ಎಲ್.ಎಲ್. ಎಂ , ಎಂ.ಫಾರ್ಮ, ಎಂ.ಡಿ , ಎಂ,ಇ, ಎಂ.ಟೆಕ್, ಎಂ.ಬಿ.ಎ, ಪಿ.ಎಚ್.ಡಿ, ಇತ್ಯಾದಿ ಉನ್ನತ ವ್ಯಾಸಂಗದ ಕೋರ್ಸುಗಳು ಹಾಗೂ ಬಿ.ಎಸ್.ಸಿ ಪ್ಯಾರಾ ಮೆಡಿಕಲ್ & ಬಿ.ಎಸ್.ಸಿ ಬಯೋಟೆಕ್.

ಕೋರ್ಸುಗಳ ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ

ಅರ್ಹತೆಗಳು:

 • ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿರಬೇಕು
 • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಹಿಂದುಳಿದ ವರ್ಗಗಳ ಪ್ರವರ್ಗ -3ಎ ರ ಕ್ರಮ ಸಂಖ್ಯೆ 1(ಎ) ರಿಂದ 1(ಟಿ) ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಗೌಡ ಹಳ್ಳಿಕಾರ್, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡರ್, ನಾಮಧಾರಿಗೌಡ, ಉಪ್ಪಿನ ಕೊಳಗ / ಉತ್ತಮ ಕೊಳಗ ಒಕ್ಕಲಿಗ ಸಮುದಾಯಗಳಿಗೆ ಸೇರಿದವಾಗಿರಬೇಕು.
 • ಕುಟುಂಬದ ವಾರ್ಷಿಕ ಆದಾಯ ರೂ. 3,50,000/- ಗಳನ್ನು ಮೀರಿರಬಾರದು.
 • ವಿದ್ಯಾರ್ಥಿಗಳು ಸರ್ಕಾರಿ / ಮಾನ್ಯತೆ ಪಡೆದ ಅನುಧಾನಿತ ಮತ್ತು ಅನುಧಾನ ರಹಿತ , ಖಾಸಗಿ ಕಾಲೇಜುಗಳಲ್ಲಿ ಸಿ.ಇ.ಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು.
 • ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ನೀಟ್ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆದಿರಬೇಕು.
 • ಸ್ನಾತಕ ಪದವಿ ಫಲಾನುಭವಿಗಳು 18 ರಿಂದ 21 ವರ್ಷದ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಸ್ನಾತಕೋತ್ತರ ಪದವಿ ಫಲಾನುಭವಿಗಳು 21 ರಿಂದ 30 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
 • ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗೆ ಇತರೆ ಯಾವುದೇ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆ / ಇಲಾಖೆಗಳಿಂದ ಸಾಲವನ್ನು ಪಡೆದಿರಬಾರದು
 • ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ.

ಸಾಲದ ಮೊತ್ತಗಳ ವಿವರಗಳು

ಶೈಕ್ಷಣಿಕ ಸಾಲಸಾಲದ ಮೊತ್ತ
ವಾರ್ಷಿಕ ಗರಿಷ್ಟರೂ. 1,00,000/-
ವಾರ್ಷಿಕ ಬಡ್ಡಿ ಶೇ. 2 ರಷ್ಟು
ಶೈಕ್ಷಣಿಕ ಸಾಲ ಯೋಜನೆ: ನವೀಕರಣ
2 ನೇ / 3 ನೇ ಕಂತಿನ ಸಾಲ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳ ಪ್ರತಿಗಳು
 • ಆಧಾರ್ ಕಾರ್ಡ್/ಪಡಿತರ ಚೀಟಿ /ಚುನಾವಣಾ ಗುರುತಿನ ಚೀಟಿಯ ದೃಢೀಕರಣದ ಪ್ರತಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದಿರುವ ವಾಸ್ತವ್ಯದ ದೃಢೀಕರಣ ಪತ್ರ
 • ಸಾಲ ಪಡೆಯಲು ತಂದೆ / ತಾಯಿ/ ಪೋಷಕರು / ಜಾಮೀನುದಾರರ ಒಪ್ಪಿಗೆ ಪತ್ರ ಹಾಗೂ ಅವರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
 • ಎಸ್.ಎಸ್.ಎಲ್.ಸಿ ಅಂಕಪಟ್ಟಿ / ಟಿ ಸಿ

ಯೋಜನೆಯ ಲಾಭವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಆಯಾ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರು , ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿಮಾಡಿ ಮೇಲಿನ ಎಲ್ಲಾ ಧಾಖಲೆಗಳನ್ನು ಲಗತ್ತಿಸಿ ಆಯಾ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು , ಜಿಲ್ಲಾ ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮ ಕಚೇರಿಗಳಿಗೆ ಸಲ್ಲಿಸಬೇಕು

4. ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ

ಯೋಜನೆಯ ಉದ್ದೇಶ:

ಶೂನ್ಯ ಬಡ್ಡಿದರದಲ್ಲಿ QS/ the University Ranking ನ ಪ್ರಕಾರ ಅಗ್ರ 500 ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಸಾಲದ ನೆರವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

ಅರ್ಹತೆಗಳು:

 • ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿರಬೇಕು.
 • ವಿದ್ಯಾರ್ಥಿ ಅಥವಾ ಕುಟುಂಬದ ವಾರ್ಷಿಕ ಆದಾಯ ರೂ. 3,50,000/- ಮೀರಿರಬಾರದು.
 • ಪಿ.ಎಚ್.ಡಿ ಅಥವಾ ರಿಸರ್ಚ್ ಗಳಿಗೆ ವಿದ್ಯಾರ್ಥಿಯ ವಯಸ್ಸು 27 ವರ್ಷ ಮೀರಿರಬಾರದು.
 • ಸ್ನಾತಕ್ಕೋತ್ತರ ಪದವಿಗಳಿಗೆ ವಿದ್ಯಾರ್ಥಿಯ ವಯಸ್ಸು 25 ವರ್ಷ ಮೀರಿರಬಾರದು.
 • ಕುಟುಂಬದಲ್ಲಿನ ಕೇವಲ ಒಬ್ಬ ಮಗ / ಮಗಳು ಈ ಯೋಜನೆಯ ಸಾಲ ಪಡೆಯಲು ಅರ್ಹರಾಗುತ್ತಾರೆ.
 • ಈ ಯೋಜನೆಯಡಿ ಒಬ್ಬ ವಿದ್ಯಾರ್ಥಿಯು ಸಾಲದ ನೆರವನ್ನು ಕೇವಲ ಒಂದು ಬಾರಿ ಮಾತ್ರ ಪಡೆಯಬಹುದಾಗಿದೆ.
 • ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ

ಸಾಲದ ಮೊತ್ತಗಳ ವಿವರಗಳು

ಶೈಕ್ಷಣಿಕ ಸಾಲಸಾಲದ ಮೊತ್ತ
ವಾರ್ಷಿಕ ಗರಿಷ್ಟರೂ. 10,00,000/-
ವಾರ್ಷಿಕ ಬಡ್ಡಿ 0

5. ಅಮೃತ ಮುನ್ನಡೆ : ಕೌಶಲ್ಯಾಭಿವೃದ್ಧಿ ತರಬೇತಿ

ಯೋಜನೆಯ ಉದ್ದೇಶ:

ಕೌಶಾಲ್ಯಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನ ತರಬೇತಿ ಸಂಸ್ಥೆಗಳಾದ (ITI’s, GTTC’s/ KGTTL’s) ಮೂಲಕ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ಆಯೋಜಿಸಿ ಉದ್ಯೋಗದ ಅವಕಾಶಗಳನ್ನು ಗರಿಷ್ಟ ಮಟ್ಟದಲ್ಲಿ ಹೆಚ್ಚಿಸಿ ಅರ್ಹ ಅಭ್ಯರ್ಥಿಗಳನ್ನು ಉದ್ಯೋಗಸ್ಥರನ್ನಾಗಿ ಮಾಡುವುದೇ ಯೋಜನೆಯ ಉದ್ದೇಶ.

ITI’s, GTTC’s/ KGTTL’s ಮೂಲಕ ಕೌಶಲ್ಯ ಅಭಿವೃದ್ಧಿ ಹೆಚ್ಚುವರಿ 101 Job role ಗಳಿಗೆ ತರಬೇತಿ ನೀಡಲಾಗುವುದು

ಅರ್ಹತೆಗಳು:

 • ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿರಬೇಕು.
 • ಅರ್ಜಿದಾರರು 18 ರಿಂದ 25 ವರ್ಷದ ವಯೋಮಿತಿಯನ್ನು ಹೊಂದಿದ್ದು ಎಸ್. ಎಸ್. ಎಲ್. ಸಿ / ಪಿ.ಯು.ಸಿ / ಡಿಪ್ಲೋಮಾ/ ಐ.ಟಿ.ಐ / ಪದವಿ ಇಂಜಿನಿಯರಿಂಗ್ ಕೋರ್ಸ ಗಳನ್ನೂ ಪೂರ್ಣಗೊಳಿಸಿರಬೇಕು.
 • ಕುಟುಂಬದ ವಾರ್ಷಿಕ ಆದಾಯ ರೂ. 8,00,000/- ಗಿಂತ ಕಡಿಮೆ ಇರಬೇಕು
 • ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ

ಅಭ್ಯರ್ಥಿಗಳು ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್ ಗಳಿಗೆ ತರಬೇತಿ ಪಡೆಯಲು ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ www.kaushalkar.com ಅಥವಾ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ kvcdc.karnataka.gov.in ನಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. Apply Online

6. ಸ್ವಾವಲಂಬಿ ಸಾರಥಿ ಯೋಜನೆ

ಯೋಜನೆಯ ಉದ್ದೇಶ:

ಒಕ್ಕಲಿಗ ಸಮುದಾಯದ ಪ್ರವರ್ಗ -1, 2ಎ , 3ಎ ಮತ್ತು 3ಬಿ ಗೆ ಸೇರಿದ ನಿರುದ್ಯೋಗಿ ಯುವಕರಿಗೆ ನಾಲ್ಕು ಚಕ್ರಗಳ ಲಘು ವಾಹನವನ್ನು ಖರೀದಿಸಲು ನಿಗಮಗಳಿಂದ ಸಹಾಯಧನ ಒದಗಿಸುವುದು (vehicle subsidy schemes) ಯೋಜನೆಯ ಉದ್ದೇಶವಾಗಿದೆ

ಅರ್ಹತೆಗಳು:

 • ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ -1, 2ಎ , 3ಎ ಮತ್ತು 3ಬಿ ಸಮುದಾಯಗಳಿಗೆ ಸೇರಿದವರಾಗಿರಬೇಕು
 • ಲಘು ವಾಹನ ಚಲನ ಪರವಾನಿಗೆಯನ್ನು ಹೊಂದಿರಬೇಕು .
 • ಕುಟುಂಬದ ವಾರ್ಷಿಕ ಆದಾಯ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ರೂ. 98,000/- ಹಾಗೂ ನಗರ ಪ್ರದೇಶದ ಅಭ್ಯರ್ಥಿಗಳಿಗೆ ರೂ. 1,20,000/- ಗಳನ್ನು ಮೀರಿರಬಾರದು.
 • ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಟ 45 ವರ್ಷ ವಯೋಮಿತಿ ಹೊಂದಿರಬೇಕು.
 • ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿನ ಯಾವುದೇ ಸೌಲಭ್ಯಗಳನ್ನು ಈ ಉದ್ದೇಶಗಳಿಗೆ ಪಡೆದಿರಬಾರದು.
 • ಕುಟುಂಬದ ಒಬ್ಬ ಸದಸ್ಯರು ಮಾತ್ರ ಯೋಜನೆಯ ಲಾಭ ಪಡೆಯಬಹುದಾಗಿದೆ.
 • ಈ ಯೋಜನೆಯಲ್ಲಿ ಮಹಿಳೆ ಹಾಗೂ ಮಂಗಳಮುಖಿಯರಿಗೂ ಸಹ ಆದ್ಯತೆ ಇರುತ್ತದೆ.
 • ಈ ಯೋಜನೆಯಡಿ ಖರೀದಿಸಿದ ವಾಹನವನ್ನು ಹಳದಿ ಬೋರ್ಡ್ ಗಳಿಗೆ ನೋಂದಾಯಿಸಿ ಸ್ವಯಂ ಟ್ಯಾಕ್ಸಿ ಚಾಲನೆಗೆ ಉದ್ದೇಶಿಸಲಾಗಿದೆ.
 • ಅಭ್ಯರ್ಥಿಯ ಬ್ಯಾಂಕ್ ಖಾತೆಯು ಆಧಾರ್ ಸಂಯೋಜಿತವಾಗಿರಬೇಕು.
 • ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ

ಸಹಾಯಧನ ವಿವರಗಳು

ಈ ಯೋಜನೆಯಡಿ ನಾಲ್ಕು ಚಕ್ರ ವಾಹನವನ್ನು ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್ / ಗ್ರಾಮೀಣ ಬ್ಯಾಂಕ್ ಗಳು ಮಂಜೂರು ಮಾಡಿದ ಸಾಲಕ್ಕೆ ಶೇ. 50 ರಷ್ಟು ಅಥವಾ ಗರಿಷ್ಟ ರೂ. 3 ಲಕ್ಷಗಳ ವರೆಗೆ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. . ಬ್ಯಾಂಕ್ ಸಾಲಕ್ಕೆ ನಿಗದಿಪಡಿಸಿದ ಚಾಲ್ತಿ ಬಡ್ಡಿ ದರದ ಅನುಸಾರ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಮರುಪಾವತಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳ ಪ್ರತಿಗಳು
 • ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ.
 • ಲಘು ವಾಹನ ಚಾಲನಾ ಪರವಾನಿಗೆ ದೃಢೀಕೃತ ಪ್ರತಿ
 • ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.
 • ಅರ್ಜಿದಾರರು ನಿರುದ್ಯೋಗಿರುವ ಬಗ್ಗೆ ಸ್ವಯಂ ಘೋಷಿತ ಪತ್ರ.

ಫಲಾನುಭವಿಗಳು ಆನ್ಲೈನ್ ಮೂಲಕ ಸೇವಾ ಸಿಂಧು, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

7. ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)

ಯೋಜನೆಯ ಉದ್ದೇಶ:

ಒಕ್ಕಲಿಗ ಸಮುದಾಯಕ್ಕೆ ಸೇರಿದ ನಿರುದ್ಯೋಗಿ ಯುವಕರಿಗೆ ಸ್ವಂತ ವ್ಯಾಪಾರ, ಸಾರಿಗೆ ,ಕೃಷಿ ಹಾಗೂ ಕೃಷಿ ಅವಲಂಬಿತ ಚಟುವಟಿಕೆಗಳು ಮತ್ತು ಇತರೆ ಯಂತ್ರೋಪಕರಣಗಳನ್ನು ಖರೀದಿಸಲು ಅಥವಾ ಉದ್ಯಮಗಳನ್ನು ಪ್ರಾರಂಭಿಸಲು ವಾಣಿಜ್ಯ ಬ್ಯಾಂಕುಗಳು ಅಥವಾ ಸಹಕಾರಿ ಸಂಘಗಳಿಂದ ಪಡೆಯುವ ಸಾಲಗಳಿಗೆ ಶೇ. 20 ರಷ್ಟು ಅಥವಾ ಗರಿಷ್ಟ ರೂ. 1 ಲಕ್ಷ ಸಹಾಯಧನ ನೀಡಿ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

ಅರ್ಹತೆಗಳು:

 • ಅಭ್ಯರ್ಥಿಗಳು ಹಿಂದುಳಿದ ವರ್ಗಗಳು ಎಂದು ಗುರುತಿಸಿದ ಪ್ರವರ್ಗ -1, 2ಎ, 3ಎ, ಮತ್ತು 3ಬಿ ಗೆ ಸೇರಿದವರಾಗಿರಬೇಕು.
 • ಕುಟುಂಬದ ವಾರ್ಷಿಕ ಆದಾಯ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ರೂ. 98,000/- ಹಾಗೂ ನಗರ ಪ್ರದೇಶದ ಅಭ್ಯರ್ಥಿಗಳಿಗೆ ರೂ. 1,20,000/- ಗಳು ಮೀರಿರಬಾರದು
 • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಹಾಗೂ 18 ರಿಂದ 55 ವರ್ಷದ ವಯಸ್ಸಿನವರಾಗಿರಬೇಕು
 • ಪ್ರವರ್ಗ -1ರ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಕನಿಷ್ಠ 7 ನೇ ತರಗತಿ ತೇರ್ಗಡೆ ಯಾಗಿರಬೇಕು ಹಾಗೂ ಇತರೆ ಪ್ರವರ್ಗ ಗಳಲ್ಲಿನ ಅರ್ಜಿದಾರರು ಕನಿಷ್ಠ 10 ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ನಿರುದ್ಯೋಗಿ ಆಗಿರಬೇಕು.

ಸಹಾಯಧನ ವಿವರಗಳು

ಈ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳು ಅಥವಾ ಸಹಕಾರಿ ಸಂಘಗಳಿಂದ ಪಡೆಯುವ ಸಾಲಗಳಿಗೆ ಶೇ. 20 ರಷ್ಟು ಅಥವಾ ಗರಿಷ್ಟ ರೂ. 1 ಲಕ್ಷಗಳ ವರೆಗೆ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಬ್ಯಾಂಕ್ ಸಾಲಕ್ಕೆ ನಿಗದಿಪಡಿಸಿದ ಚಾಲ್ತಿ ಬಡ್ಡಿ ದರದ ಅನುಸಾರ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಮರುಪಾವತಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ಜಾತಿ ಪ್ರಮಾಣ ಪತ್ರ ಹಾಗೂ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
 • ರೇಷನ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ / ಆಧಾರ್ ಕಾರ್ಡ್.
 • ವಿದ್ಯಾರ್ಹತೆಯ ಪ್ರಮಾಣ ಪತ್ರ.
 • ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಫೋಟೋ.
 • ಬ್ಯಾಂಕ್ ಪಾಸ್ ಬುಕ್ (ಬ್ಯಾಂಕ್ ಖಾತೆಯು ಆಧಾರ್ ಲಿಂಕ್ ಆಗಿರಬೇಕು).

ಫಲಾನುಭವಿಗಳು ಆನ್ಲೈನ್ ಮೂಲಕ ಸೇವಾ ಸಿಂಧು, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಪ್ರಮುಖ ಲಿಂಕ್ ಗಳು

SL Noಯೋಜನೆಗಳುಅಧಿಸೂಚನೆಗಳು
1ಸ್ವಯಂ ಉದ್ಯೋಗ ನೇರ ಸಾಲ ಯೋಜನೆClick Here
2ಗಂಗಾ ಕಲ್ಯಾಣ ನೀರಾವರಿ ಯೋಜನೆClick Here
3ಶೈಕ್ಷಣಿಕ ಸಾಲ ಯೋಜನೆClick Here
4ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲClick Here
5ಅಮೃತ ಮುನ್ನಡೆ : ಕೌಶಲ್ಯಾಭಿವೃದ್ಧಿ ತರಬೇತಿClick Here
6ಸ್ವಾವಲಂಬಿ ಸಾರಥಿ ಯೋಜನೆClick Here
7 ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)Click Here
Apply onlineClick Here

Leave a Comment