Gruha Lakshmi yojane details in Kannada updated:
ಕರ್ನಾಟಕ ಸರ್ಕಾರವು ತನ್ನ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ, ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಅಭಿವೃದ್ದಿಗಾಗಿ ಮನೆಯ ಯಜಮಾನಿಗೆ ಷರತ್ತುಗಳ ಅನ್ವಯ ತಿಂಗಳಿಗೆ 2000 ರೂಪಾಯಿಗಳ ಸಹಾಯಧನ ನೀಡಲಾಗುತ್ತದೆ.
ಈ ಲೇಖನದಲ್ಲಿ ಯೋಜನೆಯ ಉದ್ದೇಶ, ಪ್ರಯೋಜನಗಳು , ಅರ್ಹತೆಗಳು ,ಷರತ್ತುಗಳು ಹಾಗೂ ಈ ಯೋಜನೆಗೆ ಅರ್ಜಿಯ ಬಗ್ಗೆ ವಿವರಿಸಲಾಗಿದೆ. ಮುಂದೆ ಓದಿ..
ಗೃಹ ಲಕ್ಷ್ಮಿ ಯೋಜನೆ
ಕರ್ನಾಟಕ ಸರ್ಕಾರವು ಕರ್ನಾಟಕ ಗೃಹ ಲಕ್ಷ್ಮಿ ಯೋಜನೆ ಅರ್ಜಿಯ ಅಧಿಕೃತ ಚಾಲನೆಯನ್ನು ಜುಲೈ 19 2023 ರಂದು ನೀಡಲಾಗಿದೆ.
Read more
ಗೃಹಲಕ್ಷ್ಮಿ ಯೋಜನೆ -ಪರಿಚಯ
ಸನ್ಮಾನ್ಯ ಮುಖ್ಯಮಂತ್ರಿಗಳು, ಶ್ರೀ ಸಿದ್ದರಾಮಯ್ಯ ,ಸನ್ಮಾನ್ಯ ಉಪ ಮುಖ್ಯಮಂತ್ರಿಗಳು, ಶ್ರೀ ಡಿ ಕೆ ಶಿವಕುಮಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮತ್ತು ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅಧೀನದ ಸರ್ಕಾರವು ಆದೇಶ ಸಂಖ್ಯೆ: ಮಮ ಇ 70 ಮಮ ಅ 2023, ರ ಅಡಿ, ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-(ಎರಡು ಸಾವಿರ ರೂಪಾಯಿಗಳು ಮಾತ್ರ) ಗಳನ್ನು ನೀಡುವ “ಗೃಹ ಲಕ್ಷ್ಮಿ” ಯೋಜನೆಯನ್ನು ಶ್ರೀ ಸಿದ್ದರಾಮಯ್ಯ ರವರು 19/07/2023 ರಂದು ಜಾರಿಗೆ ತಂದರು. ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮುಖ್ಯ ಅಂಶಗಳು :
- ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
- “ಗೃಹ ಲಕ್ಷ್ಮಿ” ಯೋಜನೆ ಅನುಷ್ಠಾನಕ್ಕೆ ಸರ್ಕಾರ 17,500 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು,ಈ ಯೋಜನೆಗೆ ವಾರ್ಷಿಕ ಅಂದಾಜು 30,000 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಿದೆ. ಜುಲೈ 20 ರಂದು ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಮತ್ತು ನೇರ ನಗದು ವರ್ಗಾವಣೆ ಆಗಸ್ಟ್ 18 ರಂದು ಪ್ರಾರಂಭವಾಗಲಿದೆ.
- ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ನಿಗದಿತ ದಿನಾಂಕ ಹಾಗೂ ಸ್ಥಳಗಳನ್ನು ಎಸ್ ಎಂ ಎಸ್ ಮೂಲಕ ತಿಳಿಸಲಾಗುವುದು. ಹಾಗೂ ಈ ಯೋಜನೆಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ.
- ರಾಜ್ಯದ ಫಲಾನುಭವಿ ಮಹಿಳೆಯರು ಒಂದುವೇಳೆ ಅರ್ಜಿ ಸಲ್ಲಿಸಲು ನಿಗದಿಸಿದ ಕಾಲಾವಕಾಶವನ್ನು ಯಾವುದೇ ಕಾರಣದಿಂದ ತಪ್ಪಿಸಿದ್ದಲ್ಲಿ ,ನಂತರದ ದಿನಗಳಲ್ಲಿ ಅವರು ಮತ್ತೆ ಅದೇ ಕೇಂದ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಅರ್ಜಿಯನ್ನು ಸಲ್ಲಿಸಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ ಪ್ರದೇಶಗಳಿಗೆ ಪ್ರತ್ಯೇಕವಾಗಿ ಇಬ್ಬರು ಪ್ರಜಾಪ್ರತಿನಿಧಿಗಳು ಅಥವಾ ಸ್ವಯಂ ಸೇವಕರು ಗಳನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಸಂಪೂರ್ಣ ಉಚಿತವಾಗಿ ಕಾರ್ಯ ನಿರ್ವಹಿಸಲಾಗುತ್ತದೆ . ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಮಧ್ಯವರ್ತಿಗಳು ಹಾಗೂ ಪ್ರತಿನಿಧಿಗಳು ಹಣದ ಅಪೇಕ್ಷೆ ಇಟ್ಟಲ್ಲಿ 8147500500 ಅಥವಾ ಸಹಾಯವಾಣಿ ಸಂಖ್ಯೆ 1902 ಗೆ SMS ಅಥವಾ ಕರೆ ಮಾಡುವುದರ ಮೂಲಕ ತಮ್ಮ ಯಾವುದೇ ಅನುಮಾನಗಳನ್ನು, ದೂರುಗಳನ್ನು ಅಥವಾ ಸಮಸ್ಯೆಗಳನ್ನು ತಿಳಿಸಬಹುದು.
- ಯೋಜನೆಯ ಫಲಾನುಭವಿಗಳು ಸೇವಾಸಿಂದು ಅಧಿಕೃತ ವೆಬ್ ಸೈಟ್ sevasindhugs1.karnataka.gov.in ಗೆ ಭೇಟಿ ನೀಡಿ ತಮ್ಮ ನಿಗದಿತ ನೋಂದಣಿಯ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದು. ಅಥವಾ ನಿಮ್ಮ ನಿಗದಿತ ವೇಳಾಪಟ್ಟಿಯನ್ನು ತಿಳಿಯಲು 8147500500 ಅಥವಾ 8277000555 ಸಹಾಯವಾಣಿ ಸಂಖ್ಯೆಗಳಿಗೆ ನಿಮ್ಮ 12 ಅಂಕೆಯ ಪಡಿತರ ಚೀಟಿಯ ಸಂಖ್ಯೆಯನ್ನು SMS ಮೂಲಕ ಕಳುಹಿಸಿ ವಿವರಗಳನ್ನು ಪಡೆಯಬಹುದು
- ರಾಜ್ಯದಾದ್ಯಂತ ಈ ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಕರ್ನಾಟಕ ಒನ್ , ಬೆಂಗಳೂರು ಒನ್ , ಗ್ರಾಮ ಒನ್ ,ಬಾಪೂಜಿ ಸೇವಾಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಯ ಸಂಕ್ಷಿಪ್ತ ಮಾಹಿತಿ
ಯೋಜನೆಯ ಹೆಸರು: | “ಗೃಹಲಕ್ಷ್ಮಿ“ |
ಫಲಾನುಭವಿಗಳು : | ಮನೆಯ ಮುಖ್ಯಸ್ಥ ಮಹಿಳೆಯರು |
ಲೇಖನ ವರ್ಗ : | ಸರ್ಕಾರಿ ಯೋಜನೆ |
ಯೋಜನೆಯ ಪ್ರಯೋಜನಗಳು : | ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ 2000 ರೂಪಾಯಿಗಳ ..read more |
ಅರ್ಜಿಯ ವಿಧಾನ : | ಭೌತಿಕ |
ಅರ್ಜಿ ಸಲ್ಲಿಸುವ ಸ್ಥಳ : | ಕರ್ನಾಟಕ ಒನ್ , ಬೆಂಗಳೂರು ಒನ್ , ಗ್ರಾಮ ಒನ್ ,ಬಾಪೂಜಿ ಸೇವಾಕೇಂದ್ರ |
ಅರ್ಹತೆ ಮತ್ತು ಷರತ್ತುಗಳು : | ಆಹಾರ ಮತ್ತು ನಾಗರೀಕ..read more |
ಅರ್ಜಿಯ ಆರಂಭ ದಿನಾಂಕ : | 19 ಜುಲೈ 2023 |
ಅರ್ಜಿಯ ಕೊನೆಯ ದಿನಾಂಕ : | ಕೊನೆಯದಿನಾಂಕ ಇರುವುದಿಲ್ಲ |
ಯೋಜನೆಯ ಅನ್ವಯ : | ಆಗಸ್ಟ್ 18 ರ ನಂತರ |
Gruha Lakshmi yojane– ಉದ್ದೇಶ
ಅನೇಕ ಬಡ ಹಾಗೂ ಹಿಂದುಳಿದ ಕುಟುಂಬಗಳಲ್ಲಿ ಕುಂಠಿತ ಆರ್ಥಿಕ ಪರಿಸ್ಥಿತಿಗಳಿಂದಾಗಿ ಕುಟುಂಬದ ಮಹಿಳೆಯರು ಕೆಲಸ ಕಾಮಗಾರಿಗಳಿಗೆ ಹೋಗುವುದರ ಜೊತೆ ಜೊತೆಗೆ ತಮ್ಮ ಮನೆಯ ನಿರ್ವಹಣೆ ಮಾಡುವುದನ್ನು ನೀವು ನೋಡಿರುತ್ತೀರಿ. ಇಂತಹ ಅರ್ಹ ಮಹಿಳೆಯರಿಗೆ ಹಾಗೂ ಪ್ರತಿ ಕುಟುಂಬದ ಯಜಮಾನಿಗೆ ಷರತ್ತುಗಳ ಅನ್ವಯ ತಿಂಗಳಿಗೆ 2000 ರೂಪಾಯಿಗಳ ಸಹಾಯಧನ ನೀಡಿ ಆರ್ಥಿಕ ಸಬಲೀಕರಣ ಹಾಗೂ ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಗೃಹ ಲಕ್ಷ್ಮಿ ಯೋಜನೆಯ ಪ್ರಯೋಜನೆಗಳು
- ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ 2000 ರೂಪಾಯಿಗಳ ಸಹಾಯಧನ.
- ರಾಜ್ಯದ ಎಲ್ಲಾ ಅರ್ಹ ಮಹಿಳೆಯರು ಈ ಕರ್ನಾಟಕ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಬಹುದು ಹಾಗೂ ಬಡ ಕುಟುಂಬಗಳಿಗೆ ಆರ್ಥಿಕ ಅನುಕೂಲವಾಗುತ್ತದೆ.
- ಪ್ರತಿ ತಿಂಗಳು 2000 ರುಪಾಯೀಗಳನ್ನು DBT ಮುಖಾಂತರ ವರ್ಗಾವಣೆ ಮಾಡಲಾಗುವುದು
- ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ.
ಗೃಹ ಲಕ್ಷ್ಮಿ ಯೋಜನೆಯ ಷರತ್ತುಗಳು ಮತ್ತು ಮಾರ್ಗಸೂಚಿಗಳು
- ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
- ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಂದು ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಾಗುತ್ತದೆ.
- ಈ ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಕರ್ನಾಟಕ ಒನ್ , ಬೆಂಗಳೂರು ಒನ್ , ಗ್ರಾಮ ಒನ್ ,ಬಾಪೂಜಿ ಸೇವಾಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
- ನಂತರ ಜುಲೈ 20 ರಿಂದ ಫಲಾನುಭವಿಗಳ ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 18 ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು.
- ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುವುದು.
- ಅರ್ಜಿಯಲ್ಲಿನ ಅಂಶಗಳ ಬಗ್ಗೆ ತದನಂತರ ಪರಿಶೀಲನೆ ಮಾಡಲಾಗುವುದು.
- ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುವುದು ಮತ್ತು ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
- ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ ಕಾರ್ಡ್ ಗಳನ್ನು ಜೋಡಣೆ ಮಾಡಬೇಕು.
ಗೃಹ ಲಕ್ಷ್ಮಿ ಯೋಜನೆಗೆ ಇವರು ಅರ್ಹರಾಗುವುದಿಲ್ಲ
ಈ ಕೆಳಕಂಡ ಮಾನದಂಡಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ,ಈ ಯೋಜನೆಗೆ ಒಳಪಡುವುದಿಲ್ಲ
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಒಳಪಡುವುದಿಲ್ಲ.
ಗೃಹ ಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಗೆ ಬೇಕಾಗುವ ದಾಖಲಾತಿಗಳು
applications for Gruha Lakshmi Yojana ಗೆ ಕೆಳಗಿನ ದಾಖಲಾತಿಗಳು ಅಗತ್ಯ.
- ಆಧಾರ್ ಕಾರ್ಡ್ (ತನ್ನ ಹಾಗೂ ಪತಿಯ ಆಧಾರ್ ಕಾರ್ಡ್).
- ಪಡಿತರ ಚೀಟಿ (ಎಪಿಎಲ್/ಬಿಪಿಎಲ್/ ಅಂತ್ಯೋದಯ).
- ಬ್ಯಾಂಕ್ ಪಾಸ್ಬುಕ್.( IFSC code and Account details).ಒಂದುವೇಳೆ ನಿಮ್ಮ ಆಧಾರ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇದ್ದ ಸಮಯದಲ್ಲಿ.
- ಮೊಬೈಲ್ ನಂಬರ್( OTP ಒದಗಿಸಲು ).
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ವಿಧಾನ
How to apply for GruhaLakshmi scheme ?:
- ಆಹಾರ ಮತ್ತು ನಾಗರೀಕ ಇಲಾಖೆಯ ಮಾಹಿತಿಗೆ ಅನುಗುಣವಾಗಿ ಮನೆಯ ಅರ್ಹ ಯಜಮಾನಿಗೆ ಇಲಾಖೆಯಿಂದ ಅರ್ಜಿ ಸಲ್ಲಿಕೆಗೆ ನಿಗದಿತ ದಿನಾಂಕ ಹಾಗೂ ಸ್ಥಳಗಳನ್ನು SMS ಮೂಲಕ ಕಳುಹಿಸಲಾಗುವುದು. ಅಥವಾ ಫಲಾನುಭವಿಗಳು ಸೇವಾಸಿಂದು ಅಧಿಕೃತ ವೆಬ್ ಸೈಟ್ ನ sevasindhugs1.karnataka.gov.in/gl-stat-sns ಗೆ ಭೇಟಿ ನೀಡಿ, ನಿಮ್ಮ 12 ಅಂಕೆಯ ಪಡಿತರ ಚೀಟಿಯನ್ನು ನಮೂದಿಸಿದ ನಂತರ ನಿಮ್ಮ ನಿಗದಿತ ಅರ್ಜಿ ಸಲ್ಲಿಸುವ ಸ್ಥಳ , ದಿನಾಂಕ ಹಾಗೂ ಸಮಯ(slot) ನ್ನು ಪರಿಶೀಲಿಸಿಕೊಳ್ಳಬಹುದು.
- ಅಥವಾ ನಿಮ್ಮ ನಿಗದಿತ ವೇಳಾಪಟ್ಟಿಯನ್ನು ತಿಳಿಯಲು 8147500500 ಅಥವಾ 8277000555 ಸಹಾಯವಾಣಿ ಸಂಖ್ಯೆಗಳಿಗೆ ನಿಮ್ಮ 12 ಅಂಕೆಯ ಪಡಿತರ ಚೀಟಿಯ ಸಂಖ್ಯೆಯನ್ನು SMS ಮೂಲಕ ಕಳುಹಿಸಿ ವಿವರಗಳನ್ನು ಪಡೆಯಬಹುದು
- ಅರ್ಹ ಫಲಾನುಭವಿಗಳು ಹತ್ತಿರದ ಕರ್ನಾಟಕ ಒನ್ / ಬೆಂಗಳೂರು ಒನ್ / ಗ್ರಾಮ ಒನ್ / ಬಾಪೂಜಿ ಸೇವಾಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ತಮಗೆ ನಿಗದಿಪಡಿಸಿದ ದಿನಾಂಕದಂದು ನಿಗದಿಪಡಿಸಿದ ಸ್ಥಳಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಪ್ರಜಾಪ್ರತಿನಿಧಿಗಳು ಅಥವಾ ಸ್ವಯಂ ಸೇವಕರು ನಿಮ್ಮ ಮನೆಗೆ ಬಂದು ಅರ್ಜಿ ನೋಂದಾಯಿಸುವ ಕಾರ್ಯವನ್ನು ಉಚಿತವಾಗಿ ಮಾಡಲಾಗುವುದು, ಆ ಮುಖಾಂತರವು ಕೂಡ ನೀವು ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.
Important links
FAQs on Gruha Lakshmi Yojana
ಯಾರೆಲ್ಲ ಈ Gruha Lakshmi ಯೋಜನೆಗೆ ಅರ್ಹರು ?
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
ಯಾರೆಲ್ಲ ಈ Gruha Lakshmi ಯೋಜನೆಗೆ ಅರ್ಹರಲ್ಲಾ ?
ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ .
ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆ ಇದ್ದರೆ ಯಾರನ್ನು ಮನೆಯ ಯೆಜಮಾನಿ ಎಂದು ಪರಿಗಣಿಸಲಾಗುತ್ತದೆ ?
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರನ್ನು ಇಲ್ಲಿ ಪರಿಗಣಿಸಲಾಗುತ್ತದೆ
ಒಂದಕ್ಕಿಂತ ಹೆಚ್ಚು ಮಹಿಳೆ ಕುಟುಂಬದಲ್ಲಿ ಇದ್ದರೆ ಯಾರು ಅರ್ಹರು ?
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಒಬ್ಬ ಮಹಿಳೆ ಅರ್ಹರಾಗಿರುತ್ತಾರೆ.
ಈ ಯೋಜನೆಗೆ ಅರ್ಜಿ ಶುಲ್ಕ ಪಾವತಿಸಬೇಕೇ ?
ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.