ಗೃಹ ಜ್ಯೋತಿ ಯೋಜನೆ -2023 | Eligibility, Registration, How To Apply Online, Benefits of Gruha Jyoti scheme

Gruha Jyoti scheme Karnataka: Eligibility, Registration, How To Apply Online, Benefits:
ಕರ್ನಾಟಕ ಸರ್ಕಾರವು ತನ್ನ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ರಾಜ್ಯದ ನಾಗರಿಕರಿಗೆ ಸರಾಸರಿ ತಿಂಗಳಿನ ಅನ್ವಯ ಗರಿಷ್ಟ 200 ಯೂನಿಟ್ ಗಳವರೆಗಿನ ವಿದ್ಯುತ್ ಬಳಕೆಯನ್ನು ಉಚಿತವಾಗಿ ನೀಡುತ್ತದೆ.

ಈ ಯೋಜನೆಗೆ ನೀವು ಸುಲಭವಾಗಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್/ ಲ್ಯಾಪ್ ಟಾಪ್ ಗಳಲ್ಲಿ ಸೇವಾಸಿಂಧು ಅಧಿಕೃತ ವೆಬ್ಸೈಟ್(https://sevasindhugs.karnataka.gov.in/) ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು

ಈ ಲೇಖನದಲ್ಲಿ ಯೋಜನೆಯ ಉದ್ದೇಶ, ಪ್ರಯೋಜನಗಳು , ಅರ್ಹತೆಗಳು ,ಷರತ್ತುಗಳು ಹಾಗೂ ಈ ಯೋಜನೆಗೆ ಆನ್ ಲೈನ್ ಅರ್ಜಿಯ ಬಗ್ಗೆ ವಿವರಿಸಲಾಗಿದೆ. ಮುಂದೆ ಓದಿ..

ಆಗಸ್ಟ್ ತಿಂಗಳ ವಿದ್ಯುತ್ ಬಳಕೆಯನ್ನು ಉಚಿತವಾಗಿ ಪಡೆಯಲು , ಕೊನೆಯ ದಿನಾಂಕವನ್ನು ಜುಲೈ 25 ,2023 ರಂದು ನಿಗದಿಪಡಿಸಲಾಗಿದೆ. ಹಾಗಾಗಿ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.

“Griha Jyoti” scheme details in English
Gruha Jyoti scheme

Table of Contents

ಗೃಹ ಜ್ಯೋತಿ ಯೋಜನೆ -ಪರಿಚಯ

ಸನ್ಮಾನ್ಯ ಮುಖ್ಯಮಂತ್ರಿಗಳು, ಶ್ರೀ ಸಿದ್ದರಾಮಯ್ಯ ,ಸನ್ಮಾನ್ಯ ಉಪ ಮುಖ್ಯಮಂತ್ರಿಗಳು, ಶ್ರೀ ಡಿ ಕೆ ಶಿವಕುಮಾರ ಹಾಗೂ ಸನ್ಮಾನ್ಯ ಇಂಧನ ಸಚಿವರು, ಶ್ರೀ ಕೆ ಜೆ ಜಾರ್ಜೆ ರವರ ಅಧೀನದ ಸರ್ಕಾರವು ಆದೇಶ ಸಂಖ್ಯೆ: ಎನರ್ಜಿ /164/ಪಿಎಸ್ ಆರ್ / 2023, ದಿನಾಂಕ: 05.06.2023, ರ ಅಡಿ, ಜುಲೈ 2023 ರ ತಿಂಗಳು ವಿದ್ಯುತ್ ಬಳಕೆಗೆ ಆಗಸ್ಟ್ 2023 ರ ತಿಂಗಳಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಜಾರಿಗೆತರಲಾಗಿದೆ.

ಸರ್ಕಾರವು “ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗೃಹ ಬಳಕೆಯ ಗರಿಷ್ಠ 200 ಯೂನಿಟ್ ಗಳವರೆಗಿನ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23 ರ ಬಳಕೆಯ ಆಧಾರದನ್ವಯ) ಯೂನಿಟ್ ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ವಿದುತ್ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್ ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರ್ಕಾರ ಆದೇಶಿಸಿದೆ.

Gruha Jyoti ಯೋಜನೆಗೆ ನೀವು online ಮೂಲಕ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್/ ಲ್ಯಾಪ್ ಟಾಪ್ ಗಳಲ್ಲಿ ಸೇವಾಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ (online Application for Gruhajyoti scheme) ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ಮೂಲಕ ನಿಮ್ಮ ಹತ್ತಿರದ ಗ್ರಾಮ ಒನ್ , ಬೆಂಗಳೂರು ಒನ್, ಡಿಜಿಟಲ್ ಸೇವಾ ಕೇಂದ್ರ , ಗ್ರಾಮಪಂಚಾಯತ್,ನಾಡಕಚೇರಿ ಹಾಗೂ ವಿದ್ಯುತ್ ಸೇವಾ ಕೌಂಟರ್ ಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಗೃಹ ಜ್ಯೋತಿ ಯೋಜನೆ- ಉದ್ದೇಶ

ರಾಜ್ಯದ ಬಡ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದ ವರ್ಗದ ನಾಗರಿಕರಿಗೆ ಸರ್ಕಾರದ ಸಹಕಾರದ ದೃಷ್ಟಿಯಿಂದ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ವಿದ್ಯುತ್ ನ್ನು ರಾಜ್ಯದ ನಿವಾಸಿಗಳಿಗೆ ಗೃಹ ಬಳಕೆಯ ಗರಿಷ್ಟ 200 ಯೂನಿಟ್ ವಿದ್ಯುತ್ ನ್ನುಉಚಿತವಾಗಿ ಪೂರೈಸುವುದು, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಈ ಗೃಹ ಜ್ಯೋತಿ ಯೋಜನೆಯ ಉದ್ದೇಶವಾಗಿದೆ.

ಗೃಹ ಜ್ಯೋತಿ ಯೋಜನೆಯ ಪ್ರಯೋಜನೆಗಳು

  • ರಾಜ್ಯದ ಎಲ್ಲ ನಾಗರಿಕರು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಹಾಗೂ ಬಡ ಕುಟುಂಬಗಳಿಗೆ ಆರ್ಥಿಕ ಅನುಕೂಲವಾಗುತ್ತದೆ.
  • ಸರಾಸರಿ ತಿಂಗಳಿನ ಬಳಕೆಗೆ ಶೇಕಡಾ 10 ರಷ್ಟು ಹೆಚ್ಚಿನ ಯೂನಿಟ್ ವಿದ್ಯುತ್ ನ್ನು ಉಚಿತವಾಗಿ ನೀಡಲಾಗುವುದು
  • ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ / ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.

ಗೃಹ ಜ್ಯೋತಿ ಯೋಜನೆಯ ಷರತ್ತುಗಳು ಮತ್ತು ಅರ್ಹತಾ ಮಾನದಂಡಗಳು

  • ಗೃಹ ಸಂಪರ್ಕಗಳ ವಿದ್ಯುತ್ ಬಳಕೆ ಮಾತ್ರ ಯೋಜನೆಗೆ ಅರ್ಹವಾಗಿವೆ. ವಿದ್ಯುತ್ ವಾಣಿಜ್ಯ ಬಳಕೆಗೆ ಒಳಪಡುವುದಿಲ್ಲ.
  • ಬಿಲ್‌ನಿಂದ ಮನೆಯ ವಿದ್ಯುತ್ ಬಳಕೆದಾರರ ಅರ್ಹ ಮೊತ್ತವನ್ನು ಕಡಿತಗೊಳಿಸಿದ ನಂತರ ಗ್ರಾಹಕರಿಗೆ Net bill ಅನ್ನು ಪಾವತಿಸಲಾಗುತ್ತದೆ.
  • ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಹಕರು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.
  • ಮಾಸಿಕ ಮೀಟರ್ ರೀಡಿಂಗ್‌ನಲ್ಲಿ, ಒಟ್ಟು ಬಳಸಿದ ವಿದ್ಯುತ್ ಮೊತ್ತವನ್ನು ಬಿಲ್ ಆಗಿ ನಮೂದಿಸಲಾಗುತ್ತದೆ.
  • ಅರ್ಹ ಯೂನಿಟ್ / ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.
  • ಎಲ್ಲಾ ಫಲಾನುಭವಿಗಳು ತಮ್ಮ ಸಂಪರ್ಕ ಐಡಿಗಳು / ಖಾತೆ ಐಡಿಗಳನ್ನು ಆಧಾರ್‌ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
  • 30.06.2023 ರೊಳಗೆ ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಮೂರು ತಿಂಗಳೊಳಗೆ ಪಾವತಿಸುವುದು ಕಡ್ಡಾಯವಾಗಿದೆ (ಜೂನ್ 2023 ರಲ್ಲಿ ಬಳಸಿದ ವಿದ್ಯುತ್ಗಾಗಿ ಜುಲೈ 2023 ರ ಬಿಲ್ ಮೊತ್ತ ಸೇರಿದಂತೆ) ನಿಗದಿತ ಅವಧಿಯೊಳಗೆ ಬಾಕಿ ಮೊತ್ತವನ್ನು ಪಾವತಿಸದಿದ್ದರೆ, ಅಂತಹ ಗ್ರಾಹಕರು ವಿದ್ಯುತ್ ಸ್ಥಾವರಗಳಿಂದ ಸಂಪರ್ಕ ಕಡಿತಗೊಳಿಸಲಾಗುವುದು.
  • ಗೃಹ ಜ್ಯೋತಿ ಯೋಜನೆಯು ಭಾಗ್ಯಜ್ಯೋತಿ/ಕುಟೀರ ಜ್ಯೋತಿ ಯೋಜನೆ ಹಾಗೂ ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಒಳಗೊಂಡಿದೆ.
  • ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.
  • ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳುಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.

ಗೃಹ ಜ್ಯೋತಿ ಯೋಜನೆ ಆನ್ಲೈನ್ ಅಪ್ಲಿಕೇಶನ್ ಗೆ ಬೇಕಾಗುವ ದಾಖಲಾತಿಗಳು

online application for Gruha Jyoti Yojana ಗೆ ಈ ಕೆಳಗಿನ ದಾಖಲಾತಿಗಳು ಅಗತ್ಯ.

  • ಆಧಾರ್ ಕಾರ್ಡ್
  • ವಿದ್ಯುತ್ ಬಿಲ್ Account ID / Customer Number
  • ಮೊಬೈಲ್ ನಂಬರ್( OTP ಹಾಗೂ ಸಂವಹನಕ್ಕಾಗಿ )

ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ಅರ್ಜಿ ಹಾಕುವ ವಿಧಾನ

How to apply online for Gruha Jyoti scheme ?: ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಬಯಸುವ ರಾಜ್ಯದ ಎಲ್ಲಾ ಫಲಾನುಭವಿಗಳು ಸೇವಾಸಿಂಧು ಆನ್ ಲೈನ್ ಪೋರ್ಟಲ್ ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು

offixial website

Gruha Jyoti yojana online application ಗೆ ಈ ಕೆಳಗಿನ ಹಂತಗಳಲ್ಲಿ ವಿವರಿಸಲಾಗಿದೆ

  • ಗ್ರಾಹಕರೇ ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ / ಲ್ಯಾಪ್ ಟಾಪ್ ನ ಮೂಲಕ ಸೇವಾಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ .
  • ನಿಮ್ಮ ಎದುರು ಸೇವಾಸಿಂಧು ಮುಖಪುಟ ತೆರೆದುಕೊಳ್ಳುತ್ತದೆ . ಅಲ್ಲಿ ಅನೇಕ ಯೋಜನೆಗಳ ಆಯ್ಕೆಗಳು ಕಂಡುಬರುತ್ತದೆ.
  • ನೀವು “ಗೃಹಜ್ಯೋತಿ ” ಆಯ್ಕೆಯನ್ನು ಒತ್ತಿರಿ.
  • ನಂತರ, ನಿಮ್ಮ ಎದುರು ಡಿಕ್ಲರೇಷನ್ ಬರುತ್ತದೆ ಅದನ್ನು ಓದಿ right tick  ☑ ಮಾಡಿ, ನಂತರ captcha ನಮೂದಿಸಿ Agree ಒತ್ತಿರಿ .
new grauhajyoti application form
  • ನಂತರ, ನಿಮ್ಮ 12 ಅಂಕೆಯ ಆಧಾರ ಸಂಖ್ಯೆ ಯನ್ನು ಭರ್ತಿಮಾಡಿ, Get details ನ್ನು ಒತ್ತಿರಿ.
new grauhajyoti application form 2 edited
  • ನಂತರ, Application Details ನಿಮ್ಮ ಮುಂದೆ ಬರುತ್ತದೆ ಮತ್ತು ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆ ತೋರುತ್ತದೆ ಹಾಗೂ ನಿಮ್ಮ ಹೆಸರು ಸ್ವಯಂ ಚಾಲಿತವಾಗಿ ತೆಗೆದುಕೊಳ್ಳುತ್ತದೆ.
  • ನಂತರ ಎಸ್ಕಾಂ ಹೆಸರು, ನಿಮ್ಮ ವಿದ್ಯುತ್ ಸರಬರಾಜು ಸಂಸ್ಥೆಯ ಹೆಸರನ್ನು ನಮೂದಿಸಿ. ಉದಾ : BESCOM, CESC, HESCOM, GESCOM, MESCOM,HRECS
gruhajyoti 1 edited
  • ನಂತರ ಖಾತೆ ಸಂಖ್ಯೆ, ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ Account ID/Customer Number ನ್ನು ನಮೂದಿಸಿ.
  • ಒಮ್ಮೆ ನಿಮ್ಮ ವಿದ್ಯುತ್ ಬಿಲ್ ನ Account ID/Customer Number ನ ನಮೂದಿಸಿದ ತಕ್ಷಣ ನಿಮ್ಮ ಅಂದರೆ ವಿದ್ಯುತ್ ಖಾತೆದಾರರ ಹೆಸರು, ವಿಳಾಸ ಸ್ವಯಂಚಾಲಿತವಾಗಿ ತೆಗೆದುಕೊಳ್ಳುತ್ತದೆ, ಹಾಗಾಗಿ ನೀವು ಮತ್ತೆ ನಮೂದಿಸುವ ಅಗತ್ಯ ಇರುವುದಿಲ್ಲ.
  • ನಂತರ ನಿವಾಸಿ ವಿಧ, ಒಂದುವೇಳೆ ನೀವು ಮಾಲೀಕರಾಗಿದ್ದಲ್ಲಿ- ಮಾಲೀಕ ,ಬಾಡಿಗೆದಾರರಾಗಿದ್ದಲ್ಲಿ- ಬಾಡಿಗೆದಾರ ,ಹಾಗೂ ಕುಟುಂಬ ಸದಸ್ಯರಾಗಿದ್ದಲ್ಲಿ – ಕುಟುಂಬ ಸದಸ್ಯ ಎಂದು ನಮೂದಿಸಿ .
  • ನಂತರ, ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ಬಾಕ್ಸ್ ನಲ್ಲಿ ನೀವು ಮೊಬೈಲ್ ನಂಬರ್ ನ್ನು ನಮೂದಿಸಿ ,OTP ಬರುತ್ತದೆ ಅದನ್ನು ನಮೂದಿಸಿ.
  • ನಂತರ , ಕೆಳಗೆ ನೀಡಿರುವ ಡಿಕ್ಲೆರೇಷನ್ ನ್ನು ಓದಿ I Agree ಮುಂದೆ ಇರುವ ಬಾಕ್ಸ್ ನಲ್ಲಿ right tick  ☑ಮಾಡಿ, Submit ನ್ನು ಕೊಡಿ.
new grauhajyoti application form 5
  • ನಿಮ್ಮ ಅಪ್ಲಿಕೇಶನ್ ನ ಸ್ವೀಕೃತಿ ಪತ್ರವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ / ಲ್ಯಾಪ್ ಟಾಪ್ ಪರದೆಮೇಲೆ ತೋರುತ್ತದೆ , ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
  • ನಿಮ್ಮ ಅಪ್ಲಿಕೇಶನ್ ಪೂರ್ಣಗೊಳ್ಳುತ್ತದೆ.

ಹೀಗೆ ನೀವು ಸುಲಭವಾಗಿ ಅರ್ಜಿಯನ್ನು ಸ್ವಂತವಾಗಿ ಅನ್ವಯಿಸಿಕೊಳ್ಳಬಹುದು.

important note :
ಯಾರೆಲ್ಲ ಜೂನ್ ತಿಂಗಳ ಅಂತ್ಯದೊಳಗೆ ಈ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿರುತ್ತಾರೆ. ಅವರಿಗೆ ಜುಲೈ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್ ಗೆ ಯೋಜನೆಯ ಷರತ್ತುಗಳು ಹಾಗೂ ಪ್ರಯೋಜನೆಗಳು ಆಗಸ್ಟ್ ತಿಂಗಳಲ್ಲಿ ಬರುವ ವಿದ್ಯುತ್ ಬಿಲ್ಲಿಗೆ ಅನ್ವಯವಾಗುತ್ತದೆ ಹಾಗೂ ಉಚಿತವಾಗಿರುತ್ತದೆ.
ಮತ್ತು ಜೂನ್ ತಿಂಗಳಲ್ಲಿ ಯಾವುದೇ ಕಾರಣದಿಂದ ಅರ್ಜಿ ಸಲ್ಲಿಸದೆ , ಜುಲೈ ತಿಂಗಳಲ್ಲಿ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಆಗಸ್ಟ್ ತಿಂಗಳಲ್ಲಿ ಬರುವ ವಿದ್ಯುತ್ ಬಿಲ್ ಯೋಜನೆಗೆ ಅನ್ವಯವಾಗುವುದಿಲ್ಲ ಮತ್ತು ಪೂರ್ಣ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಹಾಗೂ ಆಗಸ್ಟ್ ತಿಂಗಳಲ್ಲಿ ಬಳಸಿದ ವಿದ್ಯುತ್ ಗೆ ಸೆಪ್ಟೆಂಬರ್ ತಿಂಗಳಲ್ಲಿ ಬರುವ ಬಿಲ್ ಗೆ ಈ ಯೋಜನೆ ಅನ್ವಯವಾಗುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ನೊಂದಣಿ ಆಗುತ್ತಿರುವ ಕಾರಣ ಸರ್ವರ್ ಬ್ಯುಸಿ ಬರುವುದು ಸಹಜ. ನಮ್ಮ ಸಲಹೆ ಏನೆಂದರೆ ಬೆಳಿಗ್ಗೆ 10 am ಒಳಗೆ ಹಾಗು ಸಂಜೆ 8pm ನಂತರ ಅರ್ಜಿ ಸಲ್ಲಿಕೆ ಯನ್ನು ಪ್ರಯತ್ನಿಸಿ ಸುಗಮವಾಗಿ ಪೂರ್ಣಗೊಳ್ಳುವುದು.

Important links

FAQs on Gruha Jyoti Yojana

ಯಾರೆಲ್ಲ ಈ ಯೋಜನೆಗೆ ಅರ್ಹರು ?

ಕರ್ನಾಟಕ ರಾಜ್ಯದ ಗೃಹ ಬಳಕೆಯ ವಿದ್ಯುತ್ ಸಂಪರ್ಕ ಹೊಂದಿರುವ ಎಲ್ಲಾ ನಾಗರಿಕರು ಈ ಯೋಜನೆಗೆ ಅರ್ಹರು.

ಈ ಗೃಹ ಜ್ಯೋತಿ ಯೋಜನೆ ಗೆ ಅರ್ಜಿ ಸಲ್ಲಿಸುವುದು ಹೇಗೆ ?

ನೀವು ನಿಮ್ಮ ಮೊಬೈಲ್ /ಕಂಪ್ಯೂಟರ್/ ಲ್ಯಾಪ್ ಟಾಪ್ ಗಳಲ್ಲಿ ಸೇವಾಸಿಂಧು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ,ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.

ವಿದ್ಯುತ್ ಸಂಪರ್ಕ ಖಾತೆಯು ನನ್ನ ದಿವಂಗತ ತಂದೆಯ ಹೆಸರಿಲಿನಲ್ಲಿದೆ. ನಾನು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಖಾತೆಯನ್ನು ನಿಮ್ಮ ಹೆಸರಿಗೆ ವರ್ಗಾಯಿಸಿ ನಂತರ ನೀವು ಅರ್ಜಿಯನ್ನು ಸಲ್ಲಿಸಬಹುದು. ಖಾತೆಯ ಹೆಸರನ್ನು ವಿದ್ಯುತ್ ಸೇವಾ ಕಂಟರ್ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಆದರೂ ಕುಟುಂಬದ ಸದಸ್ಯರಾಗಿ ನಿವಾಸಿ ವಿಧ ಪ್ರಕಾರವನ್ನು ನಮೂದಿಸುವ ಮೂಲಕ ಅರ್ಜಿಯನ್ನು ಮುಂದುವರಿಸಬಹುದು. ನಂತರ ನೀವು ಹೆಸರನ್ನು ಬದಲಾಯಿಸಬಹುದು.

ಜೂನ್ ತಿಂಗಳ ಒಳಗಿನ ವಿದ್ಯುತ್ ಶುಲ್ಕವನ್ನು ಪಾವತಿಸಬೇಕೇ ?

ಹೌದು ,ಜೂನ್ ತಿಂಗಳ ಅಂತ್ಯದ ಹಾಗೂ ಜೂನ್ ತಿಂಗಳಲ್ಲಿ ಬಳಸಿದ ವಿದ್ಯುತ್ ಗೆ ಜುಲೈ ತಿಂಗಳಲ್ಲಿ ನೀಡಲಾಗುವ ಬಿಲ್ಲ ನ ಮೊತ್ತವನ್ನು ಹಾಗೂ ಎಲ್ಲಾ ಬಾಕಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ

ಬಳಕೆಯ ವಿದ್ಯುತ್ 200 ಯೂನಿಟ್ ಗಿಂತ ಜಾಸ್ತಿ ಆದರೆ ಎಷ್ಟು ಶುಲ್ಕವನ್ನುಪಾವತಿಸಬೇಕು ?

ತಿಂಗಳ ಸರಾಸರಿಗೆ ಅನುಗುಣವಾಗಿ ನಿಮ್ಮ ಗೃಹ ಬಳಕೆಯ ವಿದ್ಯುತ್ ಗೆ ಶೇಕಡಾ 10 % ರಷ್ಟು ಹೆಚ್ಚುವರಿ ಯೂನಿಟ್ ಅನುಮತಿಸಿ, 200 ಯೂನಿಟ್ ಮೀರಿದ್ದರೆ ನೀವು ಸಂಪೂರ್ಣ ಶುಲ್ಕವನ್ನು ಪಾವತಿಸಬೇಕು.

ನನ್ನ ವಾರ್ಷಿಕ ಸರಸರಿಯ ಗೃಹ ವಿದ್ಯುತ್ ಬಳಕೆಯು 100 ಯೂನಿಟ್ ರ ಒಳಗಡೆ ಇರುತ್ತದೆ. ನನಗೆ 200 ಯೂನಿಟ್ ಗಳ ವರೆಗಿನ ವಿದ್ದ್ಯುತ್ ಬಳಕೆ ಉಚಿತವಾಗಿರುತ್ತದೆಯೇ ?

ಇಲ್ಲ , ನಿಮ್ಮ ವಾರ್ಷಿಕ ಸರಾಸರಿಯ ಗೃಹ ವಿದ್ಯುತ್ ಬಳಕೆಗೆ ಶೇಕಡಾ 10 % ರಷ್ಟು ಯೂನಿಟ್ ನ್ನು ಸೇರಿಸಲಾಗುವುದು ಹಾಗೂ ನಂತರ ,ನಿಮ್ಮ ವಿದ್ಯುತ್ ಬಳಕೆ ಬಿಲ್ ಮೊತ್ತ (ಶೇಕಡಾ 10% ಯೂನಿಟ್ ವಿದ್ಯುತ್ ಸೇರಿಸಿದ ನಂತರ ) 200 ಯೂನಿಟಿಗಿಂತ ಕಮ್ಮಿ ಇದ್ದು, ಸರಾಸರಿಯ ಮೊತ್ತಕ್ಕಿಂತ ಜಾಸ್ತಿ ಇದ್ದರೆ, ನೀವು ಹೆಚ್ಚುವರಿ ವಿದ್ಯುತ್ ಬಳಕೆಗೆ ಮಾತ್ರ ಶುಲ್ಕವನ್ನು ಪಾವತಿಸಬೇಕಾಗುವುದು. ಹಾಗೂ ನಿಮ್ಮ ಮೊತ್ತ 200 ಯೂನಿಟ್ ನ್ನು ದಾಟಿದರೆ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Leave a Comment